Monday, 20 February 2012

K.r market experience

ಮೊನ್ನೆ ಕೆ.ಆರ್.ಮಾರುಕಟ್ಟೆ ಯಲ್ಲಿ ನನ್ನ ಅನುಭವ

ಗಬ್ಬು ಮಾರ್ಕೆಟ್ ರಸ್ತೆ ಬದಿ ಇದ್ದ

ಹೂವಿನಂಗಡಿ ಬಳಿ ನಾ ಕಂಡೆ ಒಬ್ಬಾಕಿಯನ್ನು

ಚೌಕಾಸಿ ಮಾಡ್ತಾ ಮಾಡ್ತಾ ತಗೊತಿದ್ಲು

ಅವ್ಳು ಒಂದು ಮಳ ಮಲ್ಲಿಗೆಯನ್ನು.....

ಆಕೆ ಕೈಲಿದ್ದ ಹೂವ್ನ ಅವಳ

ಮುಡಿಗೆ ನಾನ್ ಮುಡಿಸಬೇಕಂತ ಅನಿಸ್ತು

ಪಕ್ಕದಲ್ಲಿದ್ದೋನ್ ಅದು ಮಾಡಿದಾಗ

ಅವ್ಳಿಗೆ ಮದ್ವೆ ಆಗೈತೆ ಅಂತ ಗೊತ್ತಾಯ್ತು...

ಮನಸ್ಸಿಗೆ ಬೇಜಾರ್ ಅಗೊಯ್ತು

ಮಲ್ಲಿಗೆ ಮೆಲ್ಲಗೆ ಅಲ್ಲೇ ಬಾಡೋಯ್ತು..

-ಸುಮ್ಮಿ<3<3<3

Monday, 16 January 2012

Life ishtene

ಕಾಣದ ಕೈಗಳ,ಭಾವನೆಗಳ
ಜೊತೆಗಿನ ನಿರಂತರ ಆಟ
ಕೆಡೆಸಿತೆನ್ನಯ ಕಂಗಳ ಮಧುರ
ಜೀವನದ ಬಗೆಗಿನ ನೋಟ....

... ಕುಣಿದಾಡಿದ ನಲಿಯುವ ಮನಸ್ಸಿನ
ಏರಿಳಿತಗಳು
ನಿನ್ನ ಕಂಡ ನಂತರ ಮರೆತು ಹೋದೆ
ನನ್ನಯ ನಗುವ ನೆರಳು...

ಒಡೆದು ಹೋದ ಕನ್ನಡಿಯಲ್ಲಿ
ಕಂಡ ನಿನ್ನ ಚಿತ್ತಾರ
ಮಾಡಿತೆನ್ನ ಜೀವನದ ಮುನ್ನುಡಿಯಲ್ಲಿ
ಭಾವನೆಗಳ ಅಂತ್ಯಸಂಸ್ಕಾರ....

ಬಲ್ಲವರಾರು ಆ ಭಗವಂತನ
ನಗಿಸುವ ನೋವು
ಆಗೇ ಹೊಯಿತು ಆ ಸಿಹಿಯಲ್ಲೊ
ನನ್ನ ಹ್ರುದಯದ ಸಾವು...
-ಸುಮ್ಮಿ♥♥♥

Bus beauty

ಇಂದು ನಾನು ಬಸ್ಸಿನಲ್ಲಿ ಕಂಡ ಒಬ್ಬ ಚೆಲುವೆ ಬಗ್ಗೆ ನನಗೆ ಕ್ಷಣದಲ್ಲಿ ಅನ್ಸಿದ್ದು

ಸ್ವಪ್ನಕ್ಕೆ ಎಟುಕದ,ತರ್ಕಕ್ಕೆ ನಿಲುಕದ
ಸೂರೆ ಮಾಡುವ ಬೊಗಸೆ ಕಂಗಳು....
ಕಣ್ಣೆತ್ತರ ಮಾಡಿ ನೋಡಿ ನಾಚುವಾಗ
ಇರುವ ಆ ಬಿಂಕು ಬಿನ್ನಾಣಗಳು....
ಕೂಡಿದರೊ ಉಬ್ಬಲಾರದ ,ಕಳೆದರೂ ಕಮ್ಮಿ ಆಗಲಾರದ
ಆ ಅಂದ ಚೆಂದಗಳು...
ಮೌನದ ದಾಸಿ ನೀ,ಆದರೂ ನೀ ನುಡಿವ
ಮಾತುಗಳು,ಅವು ನುಡಿ ಮುತ್ತುಗಳು...

-ಸುಮ್ಮಿ

Friday, 13 January 2012

Taathparya

ಕತ್ತಲಲ್ಲಿ ಜಿನುಗಿದರೂ ಕಣಲ್ಲಿ ಕಂಬನಿ
ಒರೆಸೋರಿಲ್ಲ, ಇದೆ ಜೀವನದ ತಾತ್ಪರ್ಯ
ಹಲವಾರು ಬಾರಿ ಪರೀಕ್ಷಿಸಿ ಕೊನೆಗೊಮ್ಮೆ
ಸೆಳೆವುದು ತನ್ನೆಡೆಗೆ ,ಇದು ಬದುಕಿನಂತ್ಯದ ಆಂತರ್ಯ...
-ಸುಮ್ಮಿ

Cheluve

ಕಾಯುತಿರುವನು ಅವಳ ನಗುವಿಗೆ
ಬಾನಿನಂಗಳದ ಚಂದಮಾಮ...
ಅವನಿಗೂ ಇರಬೆಕೆಂದು ಅನಿಸುತಿದೆ
ನನ್ನವಳ ಮೇಲೆ ಪ್ರೇಮ..

... ಸುಮ್ಮನಿರದೆ ಚೆಲ್ಲುತಿರುವನು ಬೆಳದಿಂಗಳು
ಅವಳು ನಡೆವ ಹಾದಿಯ ಮುಂದೆ
ಆಗಸದಲ್ಲಿರುವ ಚುಕ್ಕಿ ತಾರೆಗಳು
ಎಲ್ಲಾ ಇವಳ ಬೆನ್ನ ಹಿಂದೆ...

ಕಂಡ ಕನಸಿನಲಿ ಜ್ಯೋತಿಯಾಗಿ ಬಂದಳು
ಬಾಳಿಗೆ ಹೊಸ ಹುರುಪು ಬಂದಂತೆ
ಮಳೆಯಾಗಿ ನನ್ನ ನೆನೆಸಿ ಹೋದಳು
ಕಣ್ಣೀರು ಯಾರಿಗೂ ಕಾಣದಂತೆ....
-ಸುಮ್ಮಿ♥♥♥

Jeeva chaduride

ನುಂಗಿದ ಕಣ್ಣೀರಿನ ಕವನಗಳ
ನೂರೊಂದು ನೆನಪುಗಳೊಂದಿಗೆ
ತೊರೆದುಹೋಗುತ್ತಿರುವೆ ನನ್ನೊಲುಮೆಯ ಚೆಲುವೆ
ಕೋಟಿ ಕೋಟಿ ಹಂಬಲದೊಂದಿಗೆ...

... ನಾ ನಿನ್ನ ತೊರೆಯಲಾಗದಿದ್ದರೂ ನಾ
ನಿನ್ನ ಮರೆಯಲಾಗದಿದ್ದರೂ
ನಿನ್ನ ಕುಡಿನೋಟ,ಪಿಸು ಮಾತು ಝೇಂಕರಿಸುತ್ತಿದೆ
ನಾ ಎಲ್ಲಿಯೇ ಇದ್ದರೂ....

ನಾ ನಿನಗೆ ತಕ್ಕವನಾಗಿರಲು ಇಛ್ಛಿಸಿದೆ
ಸಾದ್ಯವಿಲ್ಲಾ ಎಂದು ಮತ್ತೆ ಮತ್ತೆ ನೀ ಜ್ನಾಪಿಸಿದೆ
ಒಂಟಿತನದ ಕತ್ತಲಲ್ಲಿದವನಿಗೆ ಬೆಳಕಾಗಿ ಬಂದು
ನೀ ಕುರುಡನಾಗಿರು ಎಂದು ನೀ ಶಪಿಸಿದೆ...

ನಾಲ್ಕು ಸಾಲು ನಿನ್ನ ಬಗ್ಗೆ ಬರೆಯಲಶ್ಟೇ
ಸಾಧ್ಯ ನನ್ನಿಂದ
ನೀನೆಲ್ಲೇ ಇರು,ಹೇಗೆ ಇರು,ಇರಲಿ ನಿನ್ನ
ಪಾಲಿಗೆ ಸದಾ ಅದೇ ಮುಗುಳ್ನಗೆ ಆನಂದ...
-ಸುಮ್ಮಿ♥♥♥

Yakinge

ಗಾಯ ಆಯ್ತು ಒಂದಿನ
ಅಂದು ನನ್ನ ಎಂಗೇಜ್ಮೆಂಟು
ಮಾಸದ ಗಾಯ ಅಂತ ಗೊತ್ತಿದ್ರು
ದಿನಾ ಹಚ್ಚುತ್ತಾವ್ಳೆ ಆಯಿಂಟ್ಮೆಂಟು....
-ಸುಮ್ಮಿ♥♥♥