Monday, 16 January 2012

Life ishtene

ಕಾಣದ ಕೈಗಳ,ಭಾವನೆಗಳ
ಜೊತೆಗಿನ ನಿರಂತರ ಆಟ
ಕೆಡೆಸಿತೆನ್ನಯ ಕಂಗಳ ಮಧುರ
ಜೀವನದ ಬಗೆಗಿನ ನೋಟ....

... ಕುಣಿದಾಡಿದ ನಲಿಯುವ ಮನಸ್ಸಿನ
ಏರಿಳಿತಗಳು
ನಿನ್ನ ಕಂಡ ನಂತರ ಮರೆತು ಹೋದೆ
ನನ್ನಯ ನಗುವ ನೆರಳು...

ಒಡೆದು ಹೋದ ಕನ್ನಡಿಯಲ್ಲಿ
ಕಂಡ ನಿನ್ನ ಚಿತ್ತಾರ
ಮಾಡಿತೆನ್ನ ಜೀವನದ ಮುನ್ನುಡಿಯಲ್ಲಿ
ಭಾವನೆಗಳ ಅಂತ್ಯಸಂಸ್ಕಾರ....

ಬಲ್ಲವರಾರು ಆ ಭಗವಂತನ
ನಗಿಸುವ ನೋವು
ಆಗೇ ಹೊಯಿತು ಆ ಸಿಹಿಯಲ್ಲೊ
ನನ್ನ ಹ್ರುದಯದ ಸಾವು...
-ಸುಮ್ಮಿ♥♥♥

Bus beauty

ಇಂದು ನಾನು ಬಸ್ಸಿನಲ್ಲಿ ಕಂಡ ಒಬ್ಬ ಚೆಲುವೆ ಬಗ್ಗೆ ನನಗೆ ಕ್ಷಣದಲ್ಲಿ ಅನ್ಸಿದ್ದು

ಸ್ವಪ್ನಕ್ಕೆ ಎಟುಕದ,ತರ್ಕಕ್ಕೆ ನಿಲುಕದ
ಸೂರೆ ಮಾಡುವ ಬೊಗಸೆ ಕಂಗಳು....
ಕಣ್ಣೆತ್ತರ ಮಾಡಿ ನೋಡಿ ನಾಚುವಾಗ
ಇರುವ ಆ ಬಿಂಕು ಬಿನ್ನಾಣಗಳು....
ಕೂಡಿದರೊ ಉಬ್ಬಲಾರದ ,ಕಳೆದರೂ ಕಮ್ಮಿ ಆಗಲಾರದ
ಆ ಅಂದ ಚೆಂದಗಳು...
ಮೌನದ ದಾಸಿ ನೀ,ಆದರೂ ನೀ ನುಡಿವ
ಮಾತುಗಳು,ಅವು ನುಡಿ ಮುತ್ತುಗಳು...

-ಸುಮ್ಮಿ

Friday, 13 January 2012

Taathparya

ಕತ್ತಲಲ್ಲಿ ಜಿನುಗಿದರೂ ಕಣಲ್ಲಿ ಕಂಬನಿ
ಒರೆಸೋರಿಲ್ಲ, ಇದೆ ಜೀವನದ ತಾತ್ಪರ್ಯ
ಹಲವಾರು ಬಾರಿ ಪರೀಕ್ಷಿಸಿ ಕೊನೆಗೊಮ್ಮೆ
ಸೆಳೆವುದು ತನ್ನೆಡೆಗೆ ,ಇದು ಬದುಕಿನಂತ್ಯದ ಆಂತರ್ಯ...
-ಸುಮ್ಮಿ

Cheluve

ಕಾಯುತಿರುವನು ಅವಳ ನಗುವಿಗೆ
ಬಾನಿನಂಗಳದ ಚಂದಮಾಮ...
ಅವನಿಗೂ ಇರಬೆಕೆಂದು ಅನಿಸುತಿದೆ
ನನ್ನವಳ ಮೇಲೆ ಪ್ರೇಮ..

... ಸುಮ್ಮನಿರದೆ ಚೆಲ್ಲುತಿರುವನು ಬೆಳದಿಂಗಳು
ಅವಳು ನಡೆವ ಹಾದಿಯ ಮುಂದೆ
ಆಗಸದಲ್ಲಿರುವ ಚುಕ್ಕಿ ತಾರೆಗಳು
ಎಲ್ಲಾ ಇವಳ ಬೆನ್ನ ಹಿಂದೆ...

ಕಂಡ ಕನಸಿನಲಿ ಜ್ಯೋತಿಯಾಗಿ ಬಂದಳು
ಬಾಳಿಗೆ ಹೊಸ ಹುರುಪು ಬಂದಂತೆ
ಮಳೆಯಾಗಿ ನನ್ನ ನೆನೆಸಿ ಹೋದಳು
ಕಣ್ಣೀರು ಯಾರಿಗೂ ಕಾಣದಂತೆ....
-ಸುಮ್ಮಿ♥♥♥

Jeeva chaduride

ನುಂಗಿದ ಕಣ್ಣೀರಿನ ಕವನಗಳ
ನೂರೊಂದು ನೆನಪುಗಳೊಂದಿಗೆ
ತೊರೆದುಹೋಗುತ್ತಿರುವೆ ನನ್ನೊಲುಮೆಯ ಚೆಲುವೆ
ಕೋಟಿ ಕೋಟಿ ಹಂಬಲದೊಂದಿಗೆ...

... ನಾ ನಿನ್ನ ತೊರೆಯಲಾಗದಿದ್ದರೂ ನಾ
ನಿನ್ನ ಮರೆಯಲಾಗದಿದ್ದರೂ
ನಿನ್ನ ಕುಡಿನೋಟ,ಪಿಸು ಮಾತು ಝೇಂಕರಿಸುತ್ತಿದೆ
ನಾ ಎಲ್ಲಿಯೇ ಇದ್ದರೂ....

ನಾ ನಿನಗೆ ತಕ್ಕವನಾಗಿರಲು ಇಛ್ಛಿಸಿದೆ
ಸಾದ್ಯವಿಲ್ಲಾ ಎಂದು ಮತ್ತೆ ಮತ್ತೆ ನೀ ಜ್ನಾಪಿಸಿದೆ
ಒಂಟಿತನದ ಕತ್ತಲಲ್ಲಿದವನಿಗೆ ಬೆಳಕಾಗಿ ಬಂದು
ನೀ ಕುರುಡನಾಗಿರು ಎಂದು ನೀ ಶಪಿಸಿದೆ...

ನಾಲ್ಕು ಸಾಲು ನಿನ್ನ ಬಗ್ಗೆ ಬರೆಯಲಶ್ಟೇ
ಸಾಧ್ಯ ನನ್ನಿಂದ
ನೀನೆಲ್ಲೇ ಇರು,ಹೇಗೆ ಇರು,ಇರಲಿ ನಿನ್ನ
ಪಾಲಿಗೆ ಸದಾ ಅದೇ ಮುಗುಳ್ನಗೆ ಆನಂದ...
-ಸುಮ್ಮಿ♥♥♥

Yakinge

ಗಾಯ ಆಯ್ತು ಒಂದಿನ
ಅಂದು ನನ್ನ ಎಂಗೇಜ್ಮೆಂಟು
ಮಾಸದ ಗಾಯ ಅಂತ ಗೊತ್ತಿದ್ರು
ದಿನಾ ಹಚ್ಚುತ್ತಾವ್ಳೆ ಆಯಿಂಟ್ಮೆಂಟು....
-ಸುಮ್ಮಿ♥♥♥

Political drama

ಕುರ್ಚಿ ಅಳ್ಳಾಡ್ತಾ ಇದ್ರೂನು
ಮಳೆ ಹೊಡ್ಕಂಡ್ ಕುಂತವ್ರೆ
ಸಿಕ್ಕಾಪಟ್ಟೆ ಕಷ್ಟ ಪಟ್ಟು
ಆಸ್ತಿ ಮಾಡ್ಕೊಂತಾ ಅವ್ರೆ...

... ಜನ ಬೀದೀಲ್ ಬಾಯ್ ಬಾಯ್
ಬಡ್ಕ್ಂಡ್ರೊ,ಮೂಸ್ ನೋಡೋರಿಲರಪ್ಪೋ
ತಿನ್ನೋಕ್ ಉಣ್ಣೋಕ್ ಇಲ್ಲಾ ಅಂದ್ರು
ತಂಗ್ಳು ಹಾಕೋರ್ ಇಲ್ರಪ್ಪೋ..

ಇವ್ರ ಹೆಂಡ್ರು ಮಕ್ಳ ಮ್ಯಾಲೆ
ನೊಡ್ರಿ ಚಿನ್ನದ್ ಸರಗಳು
ನಮ್ಮ ನಾಡಿನ ರೈತನ ಮೈಲಿ
ತ್ಯಾಪೆ ಹಾಕಿದ್ ಚಡ್ಡಿಗಳು..

ಸಹಾಯ ಇಲ್ದೆ ನೊವಿನಲ್ಲಿ
ಯಾವನ್ ಸತ್ರೆ ಇವ್ರ್ಗೆನೂ
ಹಾಡ ಹಗ್ಲೆ ದರೋಡೆ ಮಾಡಿದ್ರೊ
ಕೆಳೋರ್ ಇಲ್ಲ ಇವ್ರನ್ನು...

ಮ್ಯಾಲೆ ಕೆಳಗೆ ಮುಚ್ಕಂಡು
ಕೂರೋ ಜನ್ರೇ ಹೆಚ್ಚು ಇಲ್ಲೆಲ್ಲಾ
ನಮ್ಗ್ಯಾಕೆ ಊರ ಉಸಾಬ್ರಿ
ಅನ್ನೋ ನಪುಂಸಕ್ರೇ ಊರೆಲ್ಲಾ...

ಬದಲಾವಣೆಯ ಗಾಳಿ ತಂದ್ರೆ
ಉಸಿರುಗಟ್ಟಿಸಿ ಸಾಯಿಸ್ತಾರೆ
ಜೀವದ್ ಮ್ಯಾಲೆ ಆಸೆ ಇರೋರ್
ಸುಮ್ನೆ ಅಮಿಕ್ಕಂಡು ಕೂರ್ತಾರೆ...

ಯಾರೇ ಏನೇ ಬಡ್ಕ್ಂಡ್ರೊನು ಇಷ್ಟೇ
ಕಣ್ರೀ ನಮ್ ದೇಶ
ಅದ್ಯಾವಾಗ್ ಸಿಗತ್ತೋ ಈ ಶನಿಗಳಿಂದ
ದಿನಾಸಾಯೋ ನಮ್ಗೆಲ್ಲಾ ಮೋಕ್ಷ...
-ಸುಮ್ಮಿ♥♥♥

In my brothers marriage

ಇದು ಒಬ್ಬರ ಮದುವೆಲಿ ನಾನು ಸುಮ್ಮನೆ ಕೂತಿದ್ದಾಗ ಬಂದ ಕಲ್ಪನೆ

ಎಂದೂ ಚೆಂದ ಕಾಣದೆ ಇರೋಳ್

ನಮ್ಮಣ್ಣನ್ ಮದ್ವೆ ದಿನಾ ಕಂಡ್ಳಲ್ಲೋ
...
ಗಂಡು ಹೆಣ್ಣು ನೋಡೋದ್ ಬಿಟ್ಟು

ಇವಳ ಹಿಂದೆ ನಾನ್ ಹೋದ್ನಲ್ಲೋ.....

ಮದ್ವೆ ಊಟ ಮಸ್ತ್ ಇತ್ತಂತ

ಉಂಡೋರ್ ಬಂದು ಹೇಳ್ತಿದ್ರು

ಇವಳನ್ ನೋಡ್ತಾ ಕುಂತಿದ್ದೆ

ನಂಗೆ ಎಷ್ಟೇ ಹೊಟ್ಟೆ ಹಸ್ದಿದ್ರು...

ಸ್ವಲ್ಪ್ಸ್ ಸ್ವಲ್ಪಾನೆ ತುತ್ತು ಮಾಡಿ

ಕಣ್ಣಲ್ಲೇ ಸಿಹಿ ತಿನಿಸ್ತ ಇದ್ಲು

ಯಗ್ಗ ಮುಗ್ಗಾ ತಿನ್ಸಿ ತಿನ್ಸಿ

ಹೃದಯಕ್ ಸಕ್ರೆ ಖಾಯ್ಲೇ ಬರುಸ್ಬುಟ್ಲು...

ಖಾಯಿಲೆಇಂದ ಹೊರಬರೋಕೆ

ತುಂಬಾ ಸಮಯ ಬೇಕಾಯ್ತು

ಅಷ್ಟರಲ್ಲಿ ನನ್ ಕರ್ಮಕ್ಕೆ

ಅವಳ್ಗೆ ಮಕ್ಳು ಮರಿ ಆಗಿತ್ತು...

ಪ್ರೀತಿ ಬಂದಾಗ್ಲೇನೆ ಹೇಳಿದಿದ್ರೆ

ಆಗ್ತಿಧ್ಲೇನೋ ಅವ್ಳು ನನ್ನೊಳು

ಅಪ್ಪ ಅನ್ನೋದ್ ಬಿಟ್ಟು ನನ್ನ

ಈಗ ಅಂಕಲ್ ಅಂತವೇ ಅವಳ್ ಮಕ್ಳು...

-ಸುಮ್ಮಿ ♥♥♥